ಬೈಂದೂರು: ಕುಸುಮ ಫೌಂಡೇಶನ್ ನಾಗೂರು ಇವರ ವಾರ್ಷಿಕ ಸಾಂಸ್ಕೃತಿಕ ಉತ್ಸವ, ಕುಸುಮಾಂಜಲಿ -2023 ಡಿಸೆಂಬರ್ 24 ಭಾನುವಾರದಂದು ನಾಗೂರಿನಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮವು ಸಂಜೆ 03 ರಿಂದ ರಾತ್ರಿ 10.30 ರವರೆಗೆ ನಡೆಯಲಿದೆ ಎಂದು ಕುಸುಮಾ ಫೌಂಡೇಶನ್ ಸಂಸ್ಥೆಯ ಆಡಳಿತ ನಿರ್ದೇಶಕ ನಳಿನ್ ಕುಮಾರ್ ಶೆಟ್ಟಿ ಹೇಳಿದರು ಅವರು ಸಂಸ್ಥೆಯ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಡಾ. ಪಿ.ವಿ.ಭಂಡಾರಿ. ವೈದ್ಯಕೀಯ ನಿರ್ದೇಶಕರು, ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿ. ಇವರು ಆಗಮಿಸಿ ದಿಕ್ಕೂಚಿ ಭಾಷಣ ಮಾಡಲಿದ್ದಾರೆ.ಈ ವರ್ಷದ ಸಾಮಾಜಿಕ ಸೇವೆಗಾಗಿ ಹಾಗೂ ಕಲೆ-ಸಾಹಿತ್ಯದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಕೊಡ ಮಾಡುವ ಪ್ರತಿಷ್ಠಿತ ’ಕುಸುಮಶ್ರೀ’ ಪ್ರಶಸ್ತಿಯನ್ನು ಭಾಸ್ಕರ ಕೊಗ್ಗ ಕಾಮತ್, ಅಧ್ಯಕ್ಷರು, ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್, ಉಪ್ಪಿನಕುದ್ರು ಇವರಿಗೆ ಯಕ್ಷಗಾನ ಗೊಂಬೆಯಾಟ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ನೀಡಲಾಗುವುದು.ಕುಸುಮ ಫೌಂಡೇಶನ್‌ನ ಸಂಗೀತ ಹಾಗೂ ಕಲಾ ಶಾಲೆ ’ಬೋಸಮ್ ಸ್ಕೂಲ್ ಆಫ್ ಮ್ಯೂಸಿಕ್ ಮತ್ತು ಆರ್ಟ್‌ನ ವಿದ್ಯಾರ್ಥಿಗಳಿಂದ ’ಶಾಸ್ತ್ರೀಯ ಸಂಪದ’, ಸಂಗೀತ ನೃತ್ಯ ಕಾರ್ಯಕ್ರಮ ನಡೆಯಲಿರುವುದು ಹಾಗೂ ’ಈಶಲಾಸ್ಯ ನಾಟ್ಯಾಲಯ’ ಸಾಲಿಗ್ರಾಮ ತಂಡದಿಂದ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ ಎಂದರು.
ಸಂಸ್ಥೆಯ ಸಲಹೆಗಾರರಾದ ಶ್ರೀ ವೀಗನ್ ಶಂಕರನಾರಾಯಣ, ಕುಸುಮಾಂಜಲಿಯ ನಿರ್ದೇಶಕರಾದ ಕುಮಾರಿ ನಮೃತಾ ಉಪಸ್ಥಿತರಿದ್ದರು.