ಶಿರೂರು; ಯುವಶಕ್ತಿ ಶ್ರೀಗಣೇಶೋತ್ಸವ ಸಮಿತಿ(ರಿ.) ಕರಾವಳಿ ಶಿರೂರು ಇದರ 24ನೇ ವರ್ಷದ ಗಣೇಶೋತ್ಸವ ಸಮ್ಮಾನ ಕಾರ್ಯಕ್ರಮ ಯುವಶಕ್ತಿ ವೇದಿಕೆ ಕರಾವಳಿಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಬೈ.ವ್ಯ.ಸೇ.ಸ.ಸಂಘದ ನಿವೃತ್ತ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರ ಮೊಗೇರ್ ರವರನ್ನು ಯುವಶಕ್ತಿ ವತಿಯಿಂದ ಸಮ್ಮಾನಿಸಲಾಯಿತು.ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸಂಘ ಸಂಸ್ಥೆಗಳ ಸಮಾಜಮುಖಿ ಚಿಂತನೆಗಳು ಊರಿನ ಅಭಿವ್ರದ್ದಿಯ ಪ್ರತೀಕವಾಗಿದೆ.ಯುವಶಕ್ತಿ ಗಣೇಶೋತ್ಸವ ಸಮಿತಿ ಪ್ರತಿವರ್ಷ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಊರಿಗೆ ಹೆಮ್ಮೆಯಾಗಿದೆ.ಸಂಘಟನೆ ಮೂಲಕ ಯುವ ಸಮುದಾಯ ಜನಪರ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತಾಗಲಿ.ಉತ್ಸವಗಳು ಕೇವಲ ಆಡಂಬರಕಷ್ಟೆ ಸೀಮಿತವಾಗಿರಬಾರದು.ಸಂಘಟಿತರಾಗಿ ಸಮಾಜದ ಅಭಿವೃದ್ದಿಗಾಗಿ ಉತ್ಸವಗಳು ವೇದಿಕೆಯಾಗಬೇಕು ಎಂದರು.

ಯುವಶಕ್ತಿ ಅಧ್ಯಕ್ಷ ವಿಠ್ಠಲ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಯಕ್ಷ ಸಂಪದ ಕಲಾ ಬಳಗದ ಅಧ್ಯಕ್ಷ ಚಿಕ್ಕು ಪೂಜಾರಿ ಶಿರೂರು,ನಿವೃತ್ತ ಅಪೆಕ್ಸ್ ಬ್ಯಾಂಕ್‌ನ ಮಾಚ ಬಿಲ್ಲವ,ಯುವಶಕ್ತಿ ಗೌರವಾಧ್ಯಕ್ಷ ಅಣ್ಣಪ್ಪ ಮೊಗೇರ್,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಉದ್ಯಮಿ ಶೇಖರ ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬೈಂದೂರು ಆರಕ್ಷಕ ಠಾಣೆಯ ಸಿಬಂದಿ ಮೋಹನ್ ಪೂಜಾರಿ,ದಾನಿಗಳಾದ ದಾನಿಗಳಾದ ವಸಂತ ಮೊಗೇರ್ ಕಳಿಹಿತ್ಲು ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ನಾಗರಾಜ್ ಮೊಗೇರ್ ರವರನ್ನು ಯುವಶಕ್ತಿ ವತಿಯಿಂದ ಸಮ್ಮಾನಿಸಲಾಯಿತು.

ಕಾರ್ಯದರ್ಶಿ ನಯನ್ ಕುಮಾರ್ ಸ್ವಾಗತಿಸಿದರು.ಮಾಜಿ ಅಧ್ಯಕ್ಷ ಅರುಣ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು.ನಿಕಟಪೂರ್ವ ಕಾರ್ಯದರ್ಶಿ ಮಹೇಶ ಮೊಗೇರ್ ವಂದಿಸಿದರು.ಸಭಾ ಕಾರ್ಯಕ್ರಮದ ಬಳಿಕ ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ಬಡಗುತಿಟ್ಟಿನ ಪ್ರಸಿದ್ದ ಕಲಾವಿದ ವಿದ್ಯಾಧರ ಜಲವಳ್ಳಿ ಬಳಗದವರಿಂದ ರಾಜಾ ರುದ್ರಕೋಪ ಯಕ್ಷಗಾನ ಪ್ರದರ್ಶನಗೊಂಡಿತು.

ವರದಿ/ಗಿರಿ ಶಿರೂರು

ಚಿತ್ರ: ಸ್ಮಾರ್ಟ್ ಸ್ಟುಡಿಯೋ ಶಿರೂರು

 

 

 

Leave a Reply

Your email address will not be published.

2 × 3 =