ಶಿರೂರು: ಜಿ.ಪಂ ಉಡುಪಿ,ತಾಲೂಕು ಪಂಚಾಯತ್ ಬಂದೂರು,ಪಶು ಆಸ್ಪತ್ರೆ ಬೈಂದೂರು ಹಾಗೂ ಗ್ರಾಮ ಪಂಚಾಯತ್ ಶಿರೂರು ಇದರ ಸಹಯೋಗದಲ್ಲಿ ಸಾಕು ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ ಶಿರೂರು ಗ್ರಾಮ ಪಂಚಾಯತ್‌ನ ವಿವಿಧ ಭಾಗಗಳಲ್ಲಿ ನಡೆಯಿತು.
ಬೈಂದೂರು ತಾಲೂಕು ಪಶು ವೈದ್ಯಾಧಿಕಾರಿ ಡಾ.ನಾಗರಾಜ್ ಮರವಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸರಕಾರ ರೇಬಿಸ್ ರೋಗ ನಿರೋಧಕ ರೋಗ ಸೇರಿದಂತೆ ಜಾನುವಾರುಗಳ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ವಿಶೇಷ ಕ್ರಮಗಳನ್ನು ಕೈಗೊಳ್ಳುತ್ತಿದೆ.ಮಾತ್ರವಲ್ಲದೆ ಪಶು ಇಲಾಖೆ ವತಿಯಿಂದ ಪ್ರಾಣಿಗಳಿಗೆ ಸಂಬಂಧಿಸಿದಂತೆ ಅನೇಕ ಸೌಲಭ್ಯಗಳನ್ನು ನೀಡಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುವುದಾಗಿದೆ ಮತ್ತು ಜಾನುವಾರುಗಳಿಗೆ ಸಂಬಂಧಪಟ್ಟಂತ ಯಾವುದೇ ಸಮಸ್ಯೆಗಳಿದ್ದರು ಕೂಡ ಪಶು ಇಲಾಖೆಗಳನ್ನು ಸಂಪರ್ಕಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬಹುವುದಾಗಿದೆ. ರೇಬಿಸ್ ರೋಗ ನಿರೋಧಕ ನಿಯಂತ್ರಣಕ್ಕಾಗಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ರ್‍ಯಾಬೀಸ್ ಲಸಿಕಾ ಶಿಬಿರವನ್ನು ಹಾಕಿಕೊಂಡಿದ್ದು .ಬೀದಿ ನಾಯಿಗಳು ಸೇರಿದಂತೆ ಸಾಕು ನಾಯಿಗಳಿಗೂ ಕೂಡ ರೇಬಿಸ್ ರೋಗ ನಿರೋಧಕ ಲಸಿಕೆಗಳನ್ನು ಹಾಕಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ,ಪಶು ಇಲಾಖೆಯ ಪಾರ್ವತಿ,ಶಾರದಾ,ಗ್ರಾ.ಪಂ ಸಿಬಂದಿಗಳಾದ ಶಂಕರ ಬಿಲ್ಲವ,ಶಶಿಧರ ಉಪಸ್ಥಿತರಿದ್ದರು.
News/Giri shiruru