ಶಿರೂರು; ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ.ರಾಘವೇಂದ್ರ ರವರ ವಿಶೇಷ ಶಿಫಾರಸ್ಸಿನ ಮೇರೆಗೆ ಶಿರೂರು ಮೇಲ್ಪಂಕ್ತಿ ಮಾದರಿ ಹಿ.ಪ್ರಾ.ಶಾಲೆಗೆ ಪಿ.ಎಂ.ಶ್ರೀ.ಯೋಜನೆಯಡಿ 53 ಲಕ್ಷ ಅನುದಾನ ಮಂಜೂರಾಗಿದೆ.ದೇಶದ ಸ್ವಾತಂತ್ರ್ಯ ಅಮ್ರತಮಹೋತ್ಸವ ಆಚರಿಸುತ್ತಿರುವ ಈ ಸಂಧರ್ಭದಲ್ಲಿ ಪ್ರದಾನಿಗಳ ನೇತ್ರತ್ವದಲ್ಲಿ ಕೇಂದ್ರ ಸರಕಾರ ಪ್ರದಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ ಎನ್ನುವ ಯೋಜನೆ ಜಾರಿಗೆ ತಂದಿದೆ.ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ದೇಶದ 14700 ಶಾಲೆಗಳಿಗೆ ಮೂಲಭೂತ ಅಭಿವ್ರದ್ದಿಗೆ 27360 ಕೋಟಿ ಅನುದಾನ ಮೀಸಲಿರಿಸಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಎಂಟು ಹಾಗೂ ಉಡುಪಿ ಜಿಲ್ಲೆಗೆ ಮಂಜೂರಾದ 4 ಶಾಲೆಗಳ ಪೈಕಿ ಬೈಂದೂರು ವಿದಾನಸಭಾ ಕ್ಷೇತ್ರದಲ್ಲಿ ಕೇವಲ ಒಂದು ಶಾಲೆ ಆಯ್ಕೆಯಾಗಿದೆ.ಶಾಲೆಯ ಅಭಿವ್ರದ್ದಿಗಾಗಿ 53 ಲಕ್ಷ ಅನುದಾನ ದೊರೆಯಲಿದೆ. ಶಿರೂರು ಮಾದರಿ ಅಭಿವ್ರದ್ದಿ ಕುರಿತು ಸ್ಥಳೀಯ ಶಿಕ್ಷಣ ಪ್ರೇಮಿಗಳ ಬೇಡಿಕೆ,ಮುಖಂಡರ ಪ್ರಯತ್ನ,ಸಂಸದರ ಸಮರ್ಪಕ ಸ್ಪಂಧನ ದಿಂದ ಈ ಅನುದಾನ ದೊರೆತಿದೆ.ಈ ಅನುದಾನ ಬಂದಿರುವುದು ಶಾಲಾಭಿವ್ರದ್ದಿ ಸಮಿತಿ,ಹಳೆವಿದ್ಯಾರ್ಥಿ ಸಂಘ,ಪೋಷಕರು,,ಶಿಕ್ಷಕ ವ್ರಂದ ಹಾಗೂ ಮಾದರಿ ಶಾಲೆಯ ಶಿಕ್ಷಣ ಪ್ರೇಮಿಗಳಿಗೆ ಸಂತಸ ತಂದಿದೆ.