ಬೈಂದೂರು: ರಕ್ತದಾನದಿಂದ ಇನ್ನೋರ್ವರ ಜೀವ ಉಳಿಸುವುದು ಮಾತ್ರವಲ್ಲದೆ ರಕ್ತದಾನಿಗಳಿಗೂ ಸಹ ಹೃದಯ ಸಂಬಂಧಿ ಕಾಯಿಲೆಗಳ ನಿವಾರಣೆ,ಮಾನಸಿಕವಾಗಿ ಮತ್ತು ಕ್ರಿಯಾತ್ಮಕವಾಗಿ ಬದುಕುವ ಮನೋಭಾವ ಉತ್ಸುಕತೆಯನ್ನು ಮತ್ತು ಸಾಮಾಜಿಕ ಸೇವೆಯನ್ನು ಮಾಡಿದ ಸಂತೃಪ್ತಿ ಮತ್ತು ಜೀವನ ಸಾರ್ಥಕತೆಯ ಸಾರವನ್ನು ರಕ್ತದಾನ ನೀಡುತ್ತದೆ.ಓರ್ವ ವ್ಯಕ್ತಿ ರಕ್ತದಾನ ಮಾಡಿದ್ದಲ್ಲಿ ಮೂರು ಜನರ ಪ್ರಾಣವನ್ನು ಉಳಿಸಬಹುವುದಾಗಿದೆ ಹೀಗಾಗಿ ರಕ್ತದಾನ ಅತ್ಯಂತ ಶ್ರೇಷ್ಟ ದಾನವಾಗಿದೆ ಎಂದು ಮೊಗವೀರ ಮಹಾಜನ ಸಂಘ ಮುಂಬೈ ಮಾಜಿ ಅಧ್ಯಕ್ಷ ಮಹಾಬಲ ಕುಂದರ್ ಹೇಳಿದರು ಅವರು ಮಾತೃಶ್ರೀ ಸಭಾಭವನ ಶಾಲೆಬಾಗಿಲು ಉಪ್ಪುಂದದಲ್ಲಿ ನಡೆದ ಮೊಗವೀರ ಯುವ ಸಂಘಟನೆ(ರಿ.)ಉಡುಪಿ ಜಿಲ್ಲೆ ಬೈಂದೂರು-ಶಿರೂರು ಘಟಕ,ಜಿ.ಶಂಕರ ಪ್ಯಾಮಿಲಿ ಟ್ರಸ್ಟ್(ರಿ.)ಅಂಬಲಪಾಡಿ ಉಡುಪಿ,ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಸ್ವಯಂ ಪ್ರೇರಿತ ಬ್ರಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಮೊಗವೀರ ಯುವ ಸಂಘಟನೆ(ರಿ.)ಉಡುಪಿ ಜಿಲ್ಲೆ ಬೈಂದೂರು-ಶಿರೂರು ಘಟಕದ ಅಧ್ಯಕ್ಷ ರವಿರಾಜ್ ಚಂದನ್ ಕಳವಾಡಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ,ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಶಿವರಾಮ ಕೆ.ಎಂ,ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಚೇರ್‌ಮೆನ್ ಎಸ್.ಜಯಕರ ಶೆಟ್ಟಿ,ತಾ.ಪಂ ಮಾಜಿ ಅಧ್ಯಕ್ಷೆ ಶ್ಯಾಮಲ ಕುಂದರ್,ಉಪ್ಪುಂದ ಗ್ರಾ.ಪಂ ಮಾಜಿ ಅಧ್ಯಕ್ಷ ಜಗನ್ನಾಥ ಮೊಗವೀರ,ಮಾತೃಶ್ರೀ ಸಭಾಭವನದ ಮಾಲಕ ಮಂಜು ದೇವಾಡಿಗ,ಶಿರೂರು ರಾಷ್ಟ್ರಭಕ್ತ ಸ್ವಾಮಿ ವಿವೇಕಾನಂದ ವೇದಿಕೆ ಅಧ್ಯಕ್ಷ ಶಾಂತಾರಾಮ ಪೂಜಾರಿ,ನಿತೀನ್ ಬಂಕೇಶ್ವರ,ಜಿಲ್ಲಾ ಸಂಘದ ಕಾರ್ಯದರ್ಶಿ ರವಿ ಎಸ್.ಕೊವರಾಡಿ,ಜಯಂತ ಅಮೀನ್,ಮಾಜಿ ಅಧ್ಯಕ್ಷರಾದ ನಾಗರಾಜ ಚಂದನ್,ಗಂಗಾಧರ ಮೊಗವೀರ ಪಡುವರಿ,ವಸಂತ ಮೊಗವೀರ ತಗ್ಗರ್ಸೆ ಉಪಸ್ಥಿತರಿದ್ದರು.
ಕಾರ್ಯದರ್ಶಿ ಗೌತಮ್ ತಗ್ಗರ್ಸೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಸೋಮಶೇಖರ ಕಸ್ಟಮ್ ವಂದಿಸಿದರು.
News/Giri shiruru