ಬೈಂದೂರು: ಬೈಂದೂರಿನ ಐತಿಹಾಸಿಕ ಪ್ರಸಿದ್ದ ಪಡುವರಿ ಶ್ರೀ ಸೋಮೇಶ್ವರ ದೇವಸ್ಥಾನದ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಬುಧವಾರ ಸಂಭ್ರಮ ಸಡಗರದಿಂದ ನಡೆಯಿತು.ಪ್ರತಿ ವರ್ಷ ಕರ್ಕಾಟಕ ಅಮಾವಾಸ್ಯೆಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ನವ ದಂಪತಿಗಳು ಸಮುದ್ರ ಸ್ಥಾನ ಮಾಡಿ ದೇವರ ದರ್ಶನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ಪ್ರತೀತಿ ಇದೆ. ಹೀಗಾಗಿ ಬೇರೆ ಬೇರೆ ಊರುಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ.ಬೆಳಿಗ್ಗೆ ದೇವಳದಲ್ಲಿ ರುದ್ರಾಭಿಷೇಕ,ಮಹಾಮಂಗಳಾರತಿ ಮುಂತಾದ ಪೂಜಾ ವಿಧಿ ವಿಧಾನಗಳು ನಡೆಯಿತು.

ಪುಣ್ಯ ಪ್ರಾಪ್ತಿಯ ನಾಗತೀರ್ಥ: ಸೋಮೇಶ್ವರ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆಯಂದು ಇಲ್ಲಿನ ನಾಗತೀರ್ಥಕ್ಕೆ ವಿಶೇಷವಾದ ಪ್ರಾಮುಖ್ಯತೆಯಿದೆ. ಅಮಾವಾಸ್ಯೆಯಂದು ಇಲ್ಲಿನ ನಾಗತೀರ್ಥದಲ್ಲಿ ಕಾಶಿಯಿಂದ ತೀರ್ಥ ಬರುತ್ತದೆ ಎನ್ನುವ ನಂಬಿಕೆಯಿದೆ. ಕರ್ಕಾಟಕ ಅಮಾವಾಸ್ಯೆಯ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ.ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಚಿತ್ರಕ್ರಪೆ; ಸಂದೀಪ್ ಪಡುವರಿ

Leave a Reply

Your email address will not be published.

eight − 5 =