ಉಪ್ಪುಂದ; ವೃತ್ತಿಗೆ ಅನುಗುಣವಾಗಿ ಸಂಘಟನೆಗಳ ಸದಸ್ಯರ ವೃತ್ತಿ ಕೌಶಲ್ಯ ಹೆಚ್ಚಿಸಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ಅತ್ಯಗತ್ಯ. ಧ್ವನಿ-ಬೆಳಕು ವೃತ್ತಿ ನಿರತರು ಅಪಾಯದ ನಡುವೆ ಕೆಲಸ ಮಾಡಬೇಕು. ಅವರಲ್ಲಿ ವೃತ್ತಿ ಕೌಶಲ್ಯಗಳಿದ್ದರೆ ಅದರ ಬಗೆಗೆ ಮುನ್ನೆಚ್ಚರಿಕೆ ವಹಿಸಬಹುದು ಮತ್ತು ಗ್ರಾಹಕರ ನಿರೀಕ್ಷೆಯ ಮಟ್ಟದ ಸೇವೆ ನೀಡಬಹುದು ಎಂದು ಉದ್ಯಮಿ ಬಿ. ಎಸ್. ಸುರೇಶ ಶೆಟ್ಟಿ ಹೇಳಿದರು ಅವರು ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಮಂಗಳವಾರ ನಡೆದ ಬೈಂದೂರು ವಲಯ ಧ್ವನಿ-ಬೆಳಕು ಸಂಯೋಜಕರ ಸಂಘದ 12ನೇ ವಾಷಿ೯ಕ ಮಹಾಸಭೆ, ನೂತನ ಪದಾಧಿಕಾರಿಗಳ ಪದಪ್ರದಾನ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಈ ವೃತ್ತಿ ಬಾಂಧವರು ಲಕ್ಷಾಧೀಶ್ವರರು. ಇವರಿಗೆ ಹಣದ ಅವಶ್ಯಕತೆ ಇರುವುದಿಲ್ಲ ಎಂಬ ತಪ್ಪು ಭಾವನೆಂದ ಕೊರೊನಾ ಸಂಕಷ್ಟದಲ್ಲಿ ಸರ್ಕಾರ, ಜನಪ್ರತಿನಿಧಿಗಳು ನಿಮ್ಮ ಹತ್ತಿರ ಸುಳಿಯಲಿಲ್ಲ. ಆದರೆ ನೀವುಗಳು ಲಕ್ಷಗಟ್ಟಲೆ ಸಾಲ ಮಾಡಿ ಉದ್ಯಮದಲ್ಲಿ ತೊಡಗಿಸಿ ನಷ್ಟದ ದಾರಿಯಲ್ಲಿ ಸಾಗುತ್ತಿರುವ ಸತ್ಯ ಇವರ್‍ಯಾರಿಗೂ ತಿಳಿಯದಿರುವುದು ಮಾತ್ರ ದುರಂತ. ಪ್ರತಿಯೊಂದು ಸಭೆ-ಸಮಾರಂಭಗಳಿಗೆ ನೀವು ಬೇಕು, ಆದರೆ ಕಷ್ಟದ ದಿನಗಳಲ್ಲಿ ಮಾತ್ರ ನೀವು ಯಾರಿಗೂ ಬೇಡ ಎನ್ನುವಂತಾಗಿದೆ. ಈ ನೆಲೆಯಲ್ಲಿ ಸಂಘಟನೆಯನ್ನು ಆರ್ಥಿಕವಾಗಿಯೂ ಬಲಪಡಿಸುವ ಅನಿವಾರ್ಯತೆ ನಿಮ್ಮ ಮುಂದಿದೆ ಎಂದರು.

ಸಂಘದ ಅಧ್ಯಕ್ಷ ಎನ್. ಶಶಿಧರ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಬಿ. ಎಸ್. ಸುರೇಶ ಶೆಟ್ಟಿ, ಯು. ಪಾಂಡುರಂಗ ಪಡಿಯಾರ್ ಇವರನ್ನು ಗೌರವಿಸಲಾತು. ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ರಾಮಕೃಷ್ಣ ಕುಂದರ್, ಪ್ರಧಾನ ಕಾರ್ಯದರ್ಶಿ ದಾಮೋದರ್ ಶೆಟ್ಟಿಗಾರ್, ಖಜಾಂಚಿ ಸಂತೋಷ್ ಶೆಟ್ಟಿಗಾರ್, ಕುಂದಾಪುರ ವಲಯಾಧ್ಯಕ್ಷ ಸರ್ದಾರ್, ಬ್ರಹ್ಮಾವರ ವಲಯಾಧ್ಯಕ್ಷ ಎಂ. ಕೆ. ಣೇಶ, ಉಡುಪಿ ವಲಯಾಧ್ಯಕ್ಷ ಪ್ರಕಾಶ ಕುಮಾರ್ ಮಲ್ಪೆ, ಉಪಾಧ್ಯಕ್ಷ ಹಸೈನಾ,ಬೈಂದೂರು ವಲಯ ಗೌರವಾಧ್ಯಕ್ಷ ಮಣಕನ ನಾರಾಯಣ, ಕಾಪು ವಲಯಾಧ್ಯಕ್ಷ ರಾಘು. ಡಿ. ಕೋಟ್ಯಾನ್, ಕಾರ್ಕಳ ವಲಯಾಧ್ಯಕ್ಷ ಧರ್ಮರಾಜ ಕುಮಾರ್ ಉಪಸ್ಥಿತರಿದ್ದರು.

ರಾಜ್ಯ ಸಮಿತಿ ಜಿಲ್ಲಾ ಪ್ರತಿನಿಧಿ ಹರೇಗೋಡು ಉದಯ್ ಆಚಾರ್ಯ ಪ್ರಾರ್ಥಿಸಿ, ಪ್ರಾಸ್ತಾವಿಸಿದರು. ಶೇಷು ದೇವಾಡಿಗ ಸ್ವಾಗತಿಸಿದರು. ಕಾರ್ಯದರ್ಶಿ ಯು.ವಿನಾಯಕ ಪ್ರಭು ವರದಿ ಹಾಗೂ ಖಜಾಂಚಿ ಪ್ರಭಾಕರ ದೇವಾಡಿಗ ಆಯ ವ್ಯಯ ಮಂಡಿಸಿದರು.

 

 

 

 

Leave a Reply

Your email address will not be published.

4 × four =