ಬೈಂದೂರು; ಬೈಂದೂರು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿರುವುದು ಅರ್ಥಹೀನ ನಿರ್ಣಯ.ವಾಸ್ತವತೆ ಅರ್ಥಮಾಡಿಕೊಳ್ಳದೆ ತರಾತುರಿಯಲ್ಲಿ ತೆಗೆದುಕೊಂಡ ನಿರ್ಣಯದಿಂದ ಇಂದು ಗ್ರಾಮೀಣ ಭಾಗದ ಜನರು ಪರದಾಡುವಂತಾಗಿದೆ.ಅನೇಕ ಸವಲತ್ತುಗಳು ಜನರಿಂದ ದೂರಾಗಿದೆ.ಅವಕಾಶ ಇದ್ದಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿ ಮರುಚಿಂತನೆ ಮಾಡಬೇಕಿದೆ.ಕಂದಾಯ ಇಲಾಖೆಯಲ್ಲಿ ನೂರಾರು ಕಡತಗಳು ವಿಲೇವಾರಿ ಆಗದೆ ಉಳಿದಿದೆ.ಕಂದಾಯ ಅಧಿಕಾರಿಗಳು ಜನಸಾಮಾನ್ಯರಿಗೆ ಅನಗತ್ಯ ಕಾರಣ ನೀಡಿ ಅಲೆಸುತ್ತಿದ್ದಾರೆ.ಏಜೆಂಟರ್ ಹಾವಳಿ ಸೇರಿದಂತೆ ಅನೇಕ ದೂರುಗಳಿವೆ.ಹೀಗಾಗಿ ಪ್ರಥಮ ಹಂತದಲ್ಲಿ ಇಲಾಖೆಗಳ ಸುಧಾರಣೆ ಮೂಲಕ ಸಮೃದ್ದ ಬೈಂದೂರು ಸಂಕಲ್ಪ ಜಾರಿಯಾಗಬೇಕಾಗಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.ಅವರು ಉಪ್ಪುಂದದಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿ ಈಗಾಗಲೇ ಬೈಂದೂರು ಕ್ಷೇತ್ರ ಹಲವು ಹೊಸತನಗಳಿಗೆ ತೆರೆದುಕೊಳ್ಳಬೇಕಿದೆ.ಅಭಿವೃದ್ದಿ ವಿಚಾರದಲ್ಲಿ ಪಕ್ಷಬೇದ ಮರೆತು ಹೋರಾಡಬೇಕಾಗದೆ.ಇಲಾಖೆಗಳಿಂದ ಸಮರ್ಪಕ ಸೇವೆ ಜನಸಾಮಾನ್ಯರಿಗೆ ದೊರೆಯಬೇಕಿದೆ.ಬಹುತೇಕ ಕಿಂಡಿ ಅಣೆಕಟ್ಟುಗಳು ಕಳಪೆಯಾಗಿದ್ದು ನೀರು ಶೇಖರಣೆಯಾಗದೆ ಈ ಬಾರಿ ಕುಡಿಯವ ನೀರಿಗಾಗಿ ಪರಿತಪಿಸಬೇಕಾಗಿದೆ.ಬಾವಿಗಳಲ್ಲೂ ಕೂಡ ನೀರಿನ ಮಟ್ಟ ಕಡಿಮೆಯಾಗಿದೆ.ಈಗಾಗಲೇ ವರಾಯಿ ಯೋಜನೆ ಕುರಿತು ಸಾಧಕ ಬಾಧಕಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಕಳಪೆ ಕಾಮಗಾರಿಗಳ ವಿರುದ್ದ ಖಡಾಖಂಡಿತವಾಗಿ ಹೋರಾಡುತ್ತೇನೆ ಎಂದರು.
ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ: ಬೈಂದೂರು ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದೆ.ಗಾಂಜಾ,ಇಸ್ಪೀಟ್, ಮಟ್ಕಾ ಮುಂತಾದ ದಂಧೆಗಳು ಬೈಂದೂರು,ಉಪ್ಪುಂದ,ಶಿರೂರು ಮುಂತಾದ ಕಡೆ ಪೊಲೀಸರ ಮಾಹಿತಿಯಲ್ಲೆ ನಡೆಯುತ್ತಿದೆ.ಇದರ ಬಗ್ಗೆ ಮಾಹಿತಿ ಇದೆ.ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿದ್ದೇನೆ.ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಕಠಿಣ ಕ್ರಮಕೈಗೊಳ್ಳಲು ತಿಳಿಸುತ್ತೇನೆ ಎಂದರು.
ಕನ್ನಡ ಶಾಲೆಗಳ ಅಭಿವೃದ್ದಿಗೆ ಚಿಂತನೆ; ಕನ್ನಡ ಶಾಲೆಗಳ ಅಭಿವೃದ್ದಿಗೆ ವಿನೂತನ ಚಿಂತನೆ ಮಾಡಲಾಗುವುದು.ಸ್ಥಳೀಯ ದಾನಿಗಳ ಸಹಕಾರದಲ್ಲಿ ಶಾಲೆ ಅಭಿವೃದ್ದಿಗೊಳಿಸಲು ಶಿಕ್ಷಕರಿಗೆ ತಿಳಿಸಿದ್ದೇನೆ.ಬೈಂದೂರು ತಾಲೂಕಿನಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲು ಆರೋಗ್ಯ ಇಲಾಖೆಗೆ ತಿಳಿಸಿದ್ದೇನೆ.ಎಲ್ಲರ ಸಹಕಾರದಲ್ಲಿ ಬೈಂದೂರಿನ ಪ್ರಗತಿಯ ಕನಸು ಕಾಣಬೇಕಿದೆ ಎಂದರು.
News/Shirurunews.com