ಬೈಂದೂರು: ಅತ್ಯುತ್ತಮ ಆರೋಗ್ಯ ವಿಮೆ ಸಂಸ್ಥೆಯಾದ ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಸೂರೆನ್ಸ್ ಕಂ.ಲಿ ಇದರ ನೂತನ ಕಛೇರಿ ಬೈಂದೂರಿನಲ್ಲಿ ಶುಕ್ರವಾರ ಶುಭಾರಂಭಗೊಂಡಿತು.

ದಕ್ಷಿಣ ಬಾರತದ ವಲಯ ಬೆಳವಣಿಗೆಯ ಅಧಿಕಾರಿ ವಿನೋದ್ ಕುಮಾರ್ ನೂತನ ಕಛೇರಿಯನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಆರೋಗ್ಯ ಕಾಳಜಿ ಕುರಿತು ಪ್ರತಿಯೊಬ್ಬರು ಮಾಹಿತಿ ಹೊಂದಿರಬೇಕು.ಅದರ ಜೊತೆಗೆ ಆರೋಗ್ಯ ಭದ್ರತೆ ಕೂಡ ಅತ್ಯಗತ್ಯ.ಸ್ಟಾರ್ ಹೆಲ್ತ ಗ್ರಾಹಕರ ಭರವಸೆ ಹೊಂದಿರುವ ಜೊತೆಗೆ ಆರೋಗ್ಯ ಸಹಕಾರದಲ್ಲಿ ಅಗ್ರಗಣ್ಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಹಿರಿಯ ವಲಯ ಪ್ರಬಂಧಕ ಕಿಶೋರ್ ಪಿ.ಹೆಚ್,ಮಂಗಳೂರು ವಲಯ ಪ್ರಬಂಧಕ ಮೆಲ್ವಿನ್ ಡಿ.ಸೋಜಾ,ಸೀನಿಯರ್ ಟ್ರೈನಿಂಗ್ ಮೆನೇಜರ್ ಗಜಾನನ ಭಟ್,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಹಿರಿಯರಾದ ನಾಕಟ್ಟೆ ಜಗನ್ನಾಥ ಶೆಟ್ಟಿ,ಕಟ್ಟಡದ ಮಾಲಿಕ ಕೃಷ್ಣಯ್ಯ ಮದ್ದೋಡಿ,ಶಿರೂರು ರೈತ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ,ಹಿರಿಯ ನಾಗರೀಕ ವೇದಿಕೆಯ ಅಜ್ಮಲ್ ಸಾಹೇಬ್,ಶಿಕ್ಷಕ ಆನಂದ ಮದ್ದೋಡಿ,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಉದ್ಯಮಿ ಪ್ರಸಾದ ಪ್ರಭು,ಶಾಖಾ ಪ್ರತಿನಿಧಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ಪ್ರಸ್ತುತ ಶಾಖೆಯು ಗ್ರಾಮೀಣ ಭಾಗದ ವ್ಯವಹಾರದಲ್ಲಿ ನಂ.1 ಶಾಖೆಯನ್ನಾಗಿ ಪ್ರತಿನಿಧಿಸಿರುವ ಶಾಖೆಯ ವ್ಯವಸ್ಥಾಪಕರಾದ ರವಿದಾಸ್ ಮೊಗೇರ್ ರವರನ್ನು ಹಿರಿಯ ಅಧಿಕಾರಗಳು ಸಂಸ್ಥೆಯ ವತಿಯಿಂದ ಸಮ್ಮಾನಿಸಿದರು.

ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಸೂರೆನ್ಸ್ ಶಾಖಾ ಸಂಸ್ಥೆಯ ಪ್ರಬಂಧಕ ರವಿದಾಸ್ ಮೊಗೇರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಾಖೆಯ ಸೇಲ್ಸ್ ಮೆನೇಜರ್ ಲೋಕೇಶ್ ಮೆನೇಜರ್ ವಂದಿಸಿದರು.

News/Giri Shiruru

pic/Shabari studio yadthare

 

 

 

 

Leave a Reply

Your email address will not be published. Required fields are marked *

sixteen + 10 =