ಬೈಂದೂರು: ಶ್ರೀ ಮಹಾವಿಷ್ಣು ದೇವಸ್ಥಾನ ತೂದಳ್ಳಿ ಯಡ್ತರೆ ಗ್ರಾಮ ಇದರ ಶ್ರೀದೇವರ ಪುನಃಪ್ರತಿಷ್ಠೆ, ಅಷ್ಟಬಂಧ,ಬ್ರಹ್ಮಕಲಶ ಮತ್ತು ಮಹಾವಿಷ್ಣುಯಾಗ,ಅನ್ನಸಂತರ್ಪಣೆ ಕಾರ್ಯಕ್ರಮ ಮಾ.26 ರಿಂದ 29 ರ ವರೆಗೆ ನಡೆಯಲಿದೆ.

ಮಾ.26 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ,ಗಣಪತಿ ಪೂಜೆ,ಪುಣ್ಯಾಹ ವಿವಿಧ ಪೂಜಾ ವಿಧಿ ವಿಧಾನಗಳು ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.ಸಂಜೆ ವಿವಿಧ ಆಯ್ದ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಮಾ.27 ರಂದು ಬೆಳಿಗ್ಗೆ ನವಗ್ರಹ ಶಾಮತಿ,ಪ್ರತಿಷ್ಠಾ ಹೋಮ,ರತ್ನಾನ್ಯಾಸ ಹೋಮ,ಅನ್ನಸಂತರ್ಪಣೆ ಹಾಗೂ ಮುಂತಾದ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಲಿದೆ.ರಾತ್ರಿ ಚಂದ್ರ ಬಂಕೇಶ್ವರ ಮತ್ತು ಬಳಗ ಬೈಂದೂರು ಇವರಿಂದ ಭಕ್ತಿಗಾನ ಸುಧೆ ನಡೆಯಲಿದೆ.

ಮಾ.28 ರಂದು ಬೆಳಿಗ್ಗೆ ಅಧಿವಾಸ ಹೋಮ,ಶಕ್ತಿಹೋಮ,ಪೂರ್ಣಕಲಾವೃದ್ದಿ ಹೋಮ,ಮದ್ಯಾಹ್ನ ಬಲಿ ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.ರಾತ್ರಿ 9 ಗಂಟೆಗೆ ಸ್ಥಳೀಯರಿಂದ ಮತ್ತು ತಲೆಹರಟೆ ಖ್ಯಾತಿಯ ಜೋಕರ್ ಹನುಮಂತ ರವರಿಂದ ಸಾಂಸ್ಕ್ರತಿಕ ಸೌರಭ ಕಾರ್ಯಕ್ರಮ ನಡೆಯಲಿದೆ.

ಮಾ.29 ರಂದು ಬೆಳಿಗ್ಗೆ ಮಹಾವಿಷ್ಣುಯಾಗ,ಬ್ರಹ್ಮಕಲಶಾಭಿಷೆಕ,ಶೇಷಹೋಮ,ಅವಭೃತ ಪೂರ್ಣಾಹುತಿ,ದ್ವಜಾವರೋಹಣ,ಮಹಾಪೂಜೆ,ಪ್ರಾರ್ಥನೆ,ತೀರ್ಥ ಪ್ರಸಾದ ವಿತರಣೆ ಹಾಗೂ ಮದ್ಯಾಹ್ನ ಮಹಾಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.ಸಂಜೆ ಸಭಾ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ದೀಪ ಪ್ರಜ್ವಲನೆಗೈಯಲಿದ್ದಾರೆ. ಶ್ರೀ ಮಹಾವಿಷ್ಣು ದೇವಸ್ಥಾನದ ಅಧ್ಯಕ್ಷ ಶಾಂತಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು ಮುಂತಾದ ಗಣ್ಯರು ಆಗಮಿಸಲಿದ್ದಾರೆ.ರಾತ್ರಿ 9:30ಕ್ಕೆ ಶ್ರೀ ಆನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ಪಾವನ ತುಳಸಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

News/Giri shiruru

 

Leave a Reply

Your email address will not be published.

nine + nineteen =