ಶಿರೂರು: ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ ಅಂತಹ ಪ್ರತಿಭೆಗಳಿಗೆ ಸೂಕ್ತ ಅವಕಾಶ ದೊರೆಯಬೇಕಾದರೆ ಈ ರೀತಿಯ ಕ್ರೀಡಾ ಪಂದ್ಯಾಟದ ಆಯೋಜನೆಯ ಅವಶ್ಯಕತೆಯಿದೆ.ಅತ್ಯುತ್ತಮ ಕಬಡ್ಡಿ ಪಂದ್ಯಾಟವನ್ನು ಆಯೋಜಿಸುವ ಮೂಲಕ ಸಂಘಟನಾ ಸಾಮರ್ಥ್ಯವನ್ನು ಮೆರೆದ ಆಲಂದೂರು ಯುವಕರ ಸಾಧನೆ ಶ್ಲಾಘನೀಯವಾಗಿದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು ಅವರು  ಸ್ನೇಹ ಪ್ರೆಂಡ್ಸ್ ಆಲಂದೂರು ಇವರ ಆಶ್ರಯದಲ್ಲಿ 60 ಕೆ.ಜಿ ವಿಭಾಗದ ಪುರುಷರ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಈ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಧ.ಗ್ರಾ.ಯೋಜನೆಯ ಕೇಂದ್ರ ಸಮಿತಿ ಅಧ್ಯಕ್ಷ ರಘುರಾಮ ಕೆ.ಪೂಜಾರಿ,ಉದ್ಯಮಿ ಸುರೇಶ ಶೆಟ್ಟಿ,ಸ್ನೇಹ ಪ್ರೆಂಡ್ಸ್ ಆಲಂದೂರು ಅಧ್ಯಕ್ಷ ವಿನಾಯಕ ಗಾಣಿಗ,ಯಡ್ತರೆ ಗ್ರಾ.ಪಂ ಮಾಜಿ ಸದಸ್ಯ ಉದಯ ಮಾಕೋಡಿ,ಗ್ರಾ.ಪಂ ಸದಸ್ಯ ಉದಯ ಪೂಜಾರಿ,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಶಾಂತಾನಂದ ಶೆಟ್ಟಿ,ಸಂಚಲನ ಸಂಸ್ಥೆಯ ನಾಗಪ್ಪ ಮರಾಠಿ ಹೊಸೂರು,ಹಿರಿಯರಾದ ಮಂಜಯ್ಯ ಶೆಟ್ಟಿ,ಮಹಾದೇವ ಪೂಜಾರಿ ಕಿಸ್ಮತ್ತಿ,ಅನೀಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಸತೀಶ ಕೊಠಾರಿ ಆಲಂದೂರು ಸ್ವಾಗತಿಸಿದರು.ಆಲಂದೂರು ಮಂಜುನಾಥ ಗಾಣಿಗ ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕ ಪ್ರಕಾಶ ಮಾಕೋಡಿ ವಂದಿಸಿದರು.

ಕಬಡ್ಡಿ ಪಂದ್ಯಾಟದಲ್ಲಿ ಜಟ್ಟಿಗೇಶ್ವರ ಪ್ರೆಂಡ್ಸ್ ತಲಗೋಡು ಪ್ರಥಮ ಸ್ಥಾನ ಪಡೆದರು.ವಿಕ್ರಮ್ ಪ್ರೆಂಡ್ಸ್ ಶಿರೂರು ದ್ವಿತೀಯ ಸ್ಥಾನ ಪಡೆದರು.ತಿರುಮಲ ಪ್ರೆಂಡ್ಸ್ ತಗ್ಗರ್ಸೆ ತೃತೀಯ ಸ್ಥಾನ ಪಡೆದರು ಹಾಗೂ ಮಹಾಗಣಪತಿ ಪ್ರೆಂಡ್ಸ್ ಆಲಂದೂರು ಚತುರ್ಥ ಸ್ಥಾನ ಪಡೆದರು.

News/Giri shiruru

pic/suresh makodi alandoor

 

Leave a Reply

Your email address will not be published.

three + twelve =