ಬೈಂದೂರು: ಕೋವಿಡ್‌ನಂತಹ ಸಂಕಷ್ಟದ ಕಾಲದಲ್ಲಿ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿಗೆ ಲಸಿಕೆ ನೀಡಿರುವುದು ಭಾರತ. ಯಾವ ರೀತಿ ದೇಶವನ್ನು ಅಭಿವೃದ್ಧಿ ಪಡಿಸಬೇಕೆಂಬ ಚಿಂತನೆ ಮತ್ತು ಸಪ್ತ ಸೂತ್ರಗಳೊಂದಿಗೆ ಸವಾಲುಗಳನ್ನು ಎದುರಿಸಿ ಆರ್ಥಿಕ ಶಿಸ್ತು ಕಾಪಾಡಿಕೊಂಡು ಮಂಡಿಸಿದ ಅಭಿವೃದ್ಧಿ ಪರ ಬಜೆಟ್ ಇದಾಗಿದೆ ಎಂದು ಬಿಜೆಪಿ ಜಿಲ್ಲಾ ಸಹವಕ್ತಾರ ಶಿವಕುಮಾರ್ ಅಂಬಲಪಾಡಿ ಹೇಳಿದರು ಅವರು ಬೈಂದೂರು ಬಿಜೆಪಿ ಮಂಡಲದ ವತಿಯಿಂದ ಬೈಂದೂರು ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಕೋವಿಡ್ ಕಾಲದಲ್ಲಿ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸಲಾಗಿತ್ತು, ಅದನ್ನು 31-12-2023ರ ತನಕ ವಿಸ್ತರಿಸಲಾಗಿತ್ತು,157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆ ಆತ್ಮ ನಿರ್ಭರದಿಂದ ಅಮೃತ ಕಾಲದತ್ತ ಭಾರತ ಇದರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ರವರು ಮಂಡಿಸಿದ ಕೇಂದ್ರ ಬಜೆಟ್ 2023 ಒಂದು ಅತ್ಯುತ್ತಮ ಬಜೆಟ್ ಆಗಿ ಮೂಡಿ ಬಂದಿದೆ.ನೀರಸ ಜಗತ್ತಿಗೆ ಭಾರತ ಒಂದೇ ಭರವಸೆ ಎಂಬ ಮಾತಿನಂತೆ ಈ ಬಜೆಟ್ ಉತ್ತರದಾಯಾಗಿ ಮೂಡಿ ಬಂದಿದೆ.ಫೆಡರಲ್ ಸಿಸ್ಟಮ್‌ನಲ್ಲಿರುವ ಭಾರತದಂತಹ ದೇಶದಲ್ಲಿ ಇಂತಹ ಆಶಾದಾಯಕ ಬಜೆಟ್‌ನ್ನು ಮಂಡಿಸಲು ನಿಖರವಾದ ದೂರದೃಷ್ಟಿತ್ವ ಇಟ್ಟುಕೊಂಡಿರುವ ಸದೃಢ ಸಶಕ್ತ ಸರಕಾರದಿಂದ ಮಾತ್ರ ಸಾಧ್ಯ. ಎಲ್ಲಾ ನಗರಕ್ಕೆ ಸ್ಯಾನಿಟೇಶನ್ ಯಂತ್ರ ಸರಬರಾಜು ಮಾಡುವ ಯೋಜನೆ ಹಾಕಲಾಗಿದೆ,ಏಕಲವ್ಯ ವಸತಿ ಶಾಲೆಗಳಿಗೆ 38,8000 ಶಿಕ್ಷಕರ ನೇಮಕಾತಿಗೆ ಕಮ ಕೈಗೊಳ್ಳಲಾಗಿದೆ,5ಜಿ ಸೇವೆಗಾಗಿ 100 ಹೊಸ ಲ್ಯಾಬ್‌ಗಳನ್ನು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸ್ಥಾಪಿಸಲಾಗುವುದು,50 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು,೫೦ ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಿ ಪ್ರಚಾರ ಪಡಿಸಲಾಗುವುದು,ಎಲ್ಲಾ ರಾಜ್ಯಗಳಿಗೂ ’ವಂದೇ ಭಾರತ’ ರೈಲು ಓಡಿಸುವ ನಿರ್ಧಾರ ಕೈಗೊಂಡಿದ್ದು,ಸಹಕಾರಿ ಸಂಘಗಳ ಪಕ್ಕಾ ಲೆಕ್ಕ ತೆಗೆದು ಅದನ್ನು ಅಭಿವೃದ್ಧಿ ಪಡಿಸಿ 3 ಕೋಟಿ ತನಕ ವ್ಯವಹಾರ ನಡೆಸಲಾಗುವುದು,ಕಳೆದ ವರ್ಷದ ಬಜೆಟ್ ಕೊರತೆ 6.70% ಆದರೆ ಈ ಬಾರಿಯ ಕೊರತೆ 5.90% ಆಗಿದ್ದು 2025ರ ನಂತರ 3.50% ರ ಗುರಿ ಹಾಕಲಾಗಿದೆ,ಮೂಲಭೂತ ಸೌಕರ್ಯಕ್ಕಾಗಿ ರಾಜ್ಯಗಳಿಗೆ 50 ವರ್ಷದ ಬಡ್ಡಿ ರಹಿತ ಸಾಲ ನೀಡಲು ರೂ.1.50 ಲಕ್ಷ ಕೋಟಿ ನಿಗದಿಪಡಿಸಲಾಗಿದೆ,ನಿರ್ಯಾತ ಜಾಸ್ತಿ ಮಾಡುವ ಗುರಿಯೊಂದಿಗೆ ಆಮದು ಮಾಡುವ ಕಚ್ಛಾ ವಸ್ತುವಿಗೆ ಕಸ್ಟಂ ಡ್ಯೂಟಿ ಕಡಿಮೆ ಮಾಡಲಾಗಿದ್ದು ಸಿರಿಧಾನ್ಯಕ್ಕೆ ಶ್ರೀ ಅನ್ನ ಯೋಜನೆ ಜಾರಿ ಮಾಡಿ 20 ರಾಜ್ಯಗಳಲ್ಲಿ ಬೆಳೆಯಲು ಗುರಿ ನಿಗದಿಪಡಿಸಲಾಗಿದೆ,ಕೃಷಿ, ಹೈನು, ಪಶು, ಮೀನುಗಾರಿಕೆಗಳ ಸಾಲಕ್ಕಾಗಿ ರೂ.20 ಲಕ್ಷ ಕೋಟಿ ತೆಗೆದಿರಿಸಲಾಗಿದೆ,ಮತ್ಸ್ಯ ಸಂಪದಕ್ಕೆ ರೂ.6,000 ಕೋಟಿ ತೆಗೆದಿರಿಸಿದ್ದು ರೋಗ ಮುಕ್ತ ಗಿಡ ಸರಬರಾಜಿಗಾಗಿ ರೂ.2,200 ಕೋಟಿ ಒದಗಿಸಲಾಗಿದೆ,ಆರೋಗ್ಯ ಕ್ಷೇತ್ರಕ್ಕೆ ರೂ.88,956 ಕೋಟಿಯನ್ನು ಒದಗಿಸಲಾಗಿದೆ,ಉದ್ಯಮಕ್ಕೆ ಸಿಂಗಲ್ ವಿಂಡೋ ಸ್ಥಾಪಿಸಿ ಪಾನ್ ಸಂಖ್ಯೆಯ ಒಂದೇ ದಾಖಲೆ ಮಾಡಲಾಗುವುದು.ಹಿರಿಯ ನಾಗರಿಕರಿಗೆ ಹೆಚ್ಚಿನ ಅನುಕೂಲ ಮಾಡಲಾಗಿದೆ,ಮಹಿಳಾ ಸಂಪದದಂತೆ ಎಂ.ಎಸ್.ಎಸ್. ಪತ್ರ 2 ವರ್ಷಕ್ಕೆ ರೂ.2 ಲಕ್ಷ ನಿಗದಿಪಡಿಸಲಾಗಿದೆ,ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ರೂ.78,೦೦೦ ಕೋಟಿ ನಿಗದಿಪಡಿಸಲಾಗಿದ್ದು ದೇಖೋ ಆಪ್ನಾ ದೇಶ್ ಉಲ್ಲೇಖದೊಂದಿಗೆ ಪ್ರವಾಸ್ಯೋದ್ಯಮ ಅಭಿವೃದ್ಧಿ ಪಡಿಸಲಾಗುವುದು,ಸ್ಕಿಲ್ ಇಂದಿಯಾ ಕೌನ್ಸಿಲ್ ಸ್ಥಾಪಿಸಲಾಗುವುದು,ಪ್ರತೀ ಜಿಲ್ಲೆಗಳಲ್ಲಿ ಶಿಕ್ಷಕ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು,ಸರಕಾರಿ ನೌಕರರಿಗೆ ತರಬೇತಿಗಾಗಿ ಮಿಶನ್ ಕರ್ಮ ಯೋಗಿ ಯೋಜನೆ ಹಾಕಲಾಗಿದೆ,ಸಣ್ಣ ಕೈಗಾರಿಕೆಗಳಿಗೆ ತೆರಿಗೆ ರಾಜ್ ಪದ್ಧತಿ ತರಲಾಗಿದೆ,ಕರ್ನಾಟಕದ ಭದ್ರ 2ನೇ ಹಂತದ ಯೋಜನೆಗೆ ರೂ.5,300 ಕೋಟಿ ತೆಗೆದಿಟ್ಟು, ಅದನ್ನು ರಾಷ್ಟ್ರೀಯ ಯೋಜನೆ ಮಾಡಲಾಗಿದೆ,ಈ ಸಲದ ಬಜೆಟ್ ಹಸಿರು ಬಜೆಟ್ ಆಗಿದ್ದು, ಹಸಿರು ಯೋಜನೆ ಎಲ್ಲಾ ಘಟ್ಟಗಳಲ್ಲಿ ಹಾಕಿಕೊಳ್ಳಲಾಗಿದೆ. ಮಿಸ್ತಿ ಯೋಜನೆ ಹಾಕಿಕೊಳ್ಳಲಾಗಿದೆ,ಕರ್ನಾಟಕದ ನಿಮ್ಮಾನ್ಸ್ ಆಸ್ಪತ್ರೆಗೆ ರೂ.130 ಕೋಟಿ ಆಯೋಜಿಸಲಾಗಿದೆ ಎಂದರು.
ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಭಾರತ ದೇಶದ ಕೂಲಿ ಕಾರ್ಮಿಕರಿಗೆ ,ಕೃಷಿಕರಿಗೆ ನಗರ ವಾಸಿಗಳಿಗೆ ಈ ಬಜೆಟ್ ಸಾಕಷ್ಟು ಅನುಕೂಲವಾಗಿದೆ.ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಮಂತ್ರಿಮಂಡಲ,ವ್ಯವಸ್ಥೆಗಳು ಒಂದು ಕಪ್ಪು ಚುಕ್ಕೆ ಇಲ್ಲದೆ ಭ್ರಷ್ಟಾಚಾರ ರಹಿತವಾಗಿರತಕ್ಕಂತ ಸರಕಾರ ನರೇಂದ್ರ ಮೋದಿಯವರ ಸರಕಾರವಾಗಿದೆ.ಇಂದು ಭಾರತ ದೇಶದಲ್ಲಿ ಯುವಕರಿಗೆ ,ಕೃಷಿಕರಿಗೆ ಸಹ ಉತ್ತಮ ಬಜೆಟ್‌ನ್ನು ನೀಡಿದ್ದಾರೆ.ಮುಂದಿನ ದಿನಗಳಲ್ಲಿ ಸ್ವಾವಲಂಬಿ ಭಾರತದ ಕಲ್ಪನೆಯನ್ನು ಇಟ್ಟುಕೊಂಡು ಉದ್ಯೋಗಗಳನ್ನು ನಾವೇ ನಿರ್ಮಿಸಿಕೊಳ್ಳುವ ರೀತಿಯಲ್ಲಿ ನಮ್ಮ ಯುವಕರು ಮುಂದೆ ಬರಬೇಕಾಗಿದೆ.ಈ ಬಜೆಟ್ ಭಾರತ ದೇಶದಲ್ಲಿ ಅನೇಕ ಆರ್ಥಿಕ ತಜ್ಞರು,ಅನೇಕ ಕೃಷಿಕ ತಂಜ್ಞರು ಹಾಗೂ ಕೈಗಾರಿಕೋದ್ಯಮಿಗಳು ಈ ಬಜೆಟ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ,ಬೈಂದೂರು ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರು ಹಾಜರಿದ್ದರು.
News/Giri shiruru