ಬೈಂದೂರು: ಜು.29 ರಿಂದ ಪ್ರಾರಂಭಗೊಂಡು 48 ದಿನಗಳ ಕಾಲ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನ ಗೋಳಿಹೊಳೆಯಲ್ಲಿ ನಡೆಯಲಿರುವ ಬೈಂದೂರು ಚಾತುರ್ಮಾಸ್ಯ ವೃತಾಚರಣೆ ಪ್ರಯುಕ್ತ ಶಿರೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು ಹಾಗೂ ಚಾರ್ತುಮಾಸ ವೃತಾಚರಣೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಚಾತುರ್ಮಾಸ ವೃತಾಚರಣೆ ಶಿರೂರು ಗ್ರಾಮ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್,ಕಾರ್ಯದರ್ಶಿ ದಿನೇಶ ಪೂಜಾರಿ ಬಪ್ಪನಬೈಲು,ಶಿರೂರು ಬಿಲ್ಲವ ಸಮಾಜದ ಅಧ್ಯಕ್ಷ ಚಿಕ್ಕು ಪೂಜಾರಿ,ಜಿ.ಎಸ್.ಬಿ ಸಮಾಜದ ಹಿರಿಯರಾದ ಎಸ್.ಪ್ರಕಾಶ ಪ್ರಭು,ರವೀಂದ್ರ ಶೆಟ್ಟಿ ಹೊಸ್ಮನೆ,ಅಕ್ಷಯ ನಾರಾಯಣ ಶ್ರೀನಿವಾಸ,ಶಿಕ್ಷಕ ಗಣೇಶ ಪೂಜಾರಿ ಮೊದಲಾದವರು ಹಾಜರಿದ್ದರು.

ರಘುರಾಮ ಕೆ.ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ಸಿ.ಎನ್.ಬಿಲ್ಲವ ವಂದಿಸಿದರು.

Leave a Reply

Your email address will not be published. Required fields are marked *

seventeen − seven =