ಶಿರೂರು: ಸಾರ್ವಜನಿಕರಿಗೆ ಅನುಕೂಲವಾಗುವ ಪ್ರತಿ ಕಾರ್ಯವು ಸರಕಾರದಿಂದ ದೊಡ್ಡ ಪ್ರಮಾಣದಲ್ಲಿ ನಿರೀಕ್ಷಿಸಲು ಸಾಧ್ಯವಿರುವುದಿಲ್ಲ.ವಿವಿಧ ಇಲಾಖೆಯ ಸಹಭಾಗಿತ್ವ ಹಾಗೂ ಸಾರ್ವಜನಿಕರ ಸಹಕಾರ ಇದ್ದಾಗ ಮಾತ್ರ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ.ಈ ಭಾಗದಲ್ಲಿ ಗ್ರಾಮ ಅರಣ್ಯ ಇಲಾಖೆ ಸ್ಥಾಪಿಸಿದ ಬಸ್ ತಂಗುದಾಣ ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಪಡುವರಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸುರೇಶ್ ಬಟ್ವಾಡಿ ಹೇಳಿದರು ಅವರು ಗ್ರಾಮ ಅರಣ್ಯ ಸಮಿತಿ ಪಡುವರಿ ಇದರ ವತಿಯಿಂದ ಮೂರು ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸ್ ತಂಗುದಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಈ ಮಾತುಗಳನ್ನಾಡಿದರು.
ಈ ಸಂಧರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಮಾಜಿ ಗ್ರಾ.ಪಂ ಸದಸ್ಯರಾದ ವೆಂಕಟರಮಣ ದೇವಾಡಿಗ ಹೇನ್‌ಬೇರು,ನರಸಿಂಹ ದೇವಾಡಿಗ,ಸಂಜಯ ಬೈಂದೂರು,ದಾರಮ್ಮ,ಪ್ರಕಾಶ ದೇವಾಡಿಗ ಹೇನ್‌ಬೇರು,ಉಮೇಶ ದೇವಾಡಿಗ,ಅಶೋಕ್ ಹೇನ್‌ಬೇರು,ಮಹಾಬಲ ದೇವಾಡಿಗ,ಬೈಂದೂರು ಆರಕ್ಷಕ ಠಾಣೆಯ ನವೀನ್, ಶಿರೂರು ಗ್ರಾ.ಪಂ ಸದಸ್ಯರಾದ ರವೀಂದ್ರ ಶೆಟ್ಟಿ ಆರ್‍ಮಕ್ಕಿ,ಸುರೇಂದ್ರ ದೇವಾಡಿಗ ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.
News/pic: Giri shiruru