ಬೈಂದೂರು: ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕ ಇದರ 2025 – 26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಯಡ್ತರೆ ಮೊಗವೀರ ಭವನದಲ್ಲಿ ನಡೆಯಿತು.

ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕದ ಅಧ್ಯಕ್ಷ ಸೋಮಶೇಖರ ಜಿ.ಕಸ್ಟ್ಂ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ರವೀಶ್ ಎಸ್.ಕೊರವಡಿ,ಮಾಜಿ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ,ಹೆಮ್ಮಾಡಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರ ತೋಳಾರ್,ಮೊಗವೀರ ಸಮಾಜದ ಗೌರವ ಸಲಹೆಗಾರ ರಾಮ ಮೊಗವೀರ ಕಳವಾಡಿ,ನಿಕಟಪೂರ್ವಾಧ್ಯಕ್ಷ  ರವಿರಾಜ ಚಂದನ್ ಕಳವಾಡಿ ,ತಾ.ಪಂ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 2027-28ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕೋಶಾಧಿಕಾರಿ ನಾಗರಾಜ ಕಸ್ಟಮ್ ವಾರ್ಷಿಕ ಆಯ ವ್ಯಯ ಮಂಡಿಸಿದರು.ಕಾರ್ಯದರ್ಶಿ ಚಂದ್ರ  ಮೊಗವೀರ ಸೂಕುಂದ ಸ್ವಾಗತಿಸಿದರು.ನಿಕಟಪೂರ್ವಾಧ್ಯಕ್ಷ ಪಾಂಡುರಂಗ ತಗ್ಗರ್ಸೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

 

Leave a Reply

Your email address will not be published. Required fields are marked *

four × 4 =