ಬೈಂದೂರು: ಹಲಸು ಇಂದು ಜಾಗತಿಕ ಮಾನ್ಯತೆ ಪಡೆದಿದೆ.ಒಂದು ಕಾಲದಲ್ಲಿ ನಮ್ಮ ಗ್ರಾಮೀಣ ಭಾಗದಲ್ಲಿ ಹಲಸಿನ ಹಣ್ಣುಗಳನ್ನು ಕೇಳುವವರಿಲ್ಲ.ಮರದಲ್ಲೆ ಬಲಿತು ಹಣ್ಣಾಗಿ ಕೊಳೆತು ಹೋದರು ಕೂಡ ಉಪಯೋಗ ಕಡಿಮೆಯಾಗಿತ್ತು.ಆದರೆ ಈಗ ಕೃಷಿ ಬದಲಾಗಿದೆ ಹಲವು ಶೋಧನೆ ತಳಿಯ ಅವಿಷ್ಕಾರಗಳಿಂದಾಗಿ ಹಲಸು ಬಹುಬೇಡಿಕೆಯ ವಸ್ತು ಆಗಿದೆ ಮತ್ತು ಹಲಸು ಜಾಗತಿಕ ಮನ್ನಣೆ ಹೊಂದಿದೆ.ಇಂತಹ ಮೇಳಗಳ ಮೂಲಕ ಹಲಸಿನ ನೂರಾರು ಖಾದ್ಯಗಳ ಪರಿಚಯದ ಜೊತೆಗೆ ಉತ್ತಮ ಮಾರುಕಟ್ಟೆ ದೊರೆಯುತ್ತದೆ. ಈ ಮೇಳವು ಮೂರು ದಿನಗಳ ವರೆಗೆ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು  ಸಮೃದ್ದ ಬೈಂದೂರು ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ ಹೇಳಿದರು ಅವರು ರೋಟರಿ ಕ್ಲಬ್ ಬೈಂದೂರು, ಉತ್ಸವ ಸಮಿತಿ ಬೈಂದೂರು,ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ,ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.) ಉಪ್ಪುಂದ,ಸಮಷ್ಠಿ ಪ್ರತಿಷ್ಠಾನ ಹಾಗೂ ರೈತ ಬಳಗ ಇವರ ಸಹಯೋಗದಲ್ಲಿ ಯಡ್ತರೆ ಜೆ.ಎನ್.ಆರ್ ಕಲಾಮಂದಿರದಲ್ಲಿ ನಡೆದ ದ್ವಿತೀಯ ವರ್ಷದ ಹಲಸು ಹಾಗೂ ಕೃಷಿ ಮೇಳವನ್ನು ಉದ್ಘಾಟಿಸಿ ಈ ಮಾತುಗಳನ್ನಾಡಿದರು.

ಉಡುಪಿ ಮಾಜಿ ಜಿ.ಪಂ ಅಧ್ಯಕ್ಷ ಎಸ್.ರಾಜು ಪೂಜಾರಿ ಹಲಸಿನ ಹಣ್ಣನ್ನು ಕತ್ತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು.

ವತ್ತಿನೆಣೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ, ಮಾಜಿ ಜಿ.ಪಂ ಸದಸ್ಯೆ ಗೌರಿ ದೇವಾಡಿಗ,ರೋಟರಿ ಸಹಾಯಕ ಗವರ್ನರ್ ಐ.ನಾರಾಯಣ,ಗುತ್ತಿಗೆದಾರ ಜಗನ್ನಾಥ ಶೆಟ್ಟಿ,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಉದ್ಯಮಿ ದಿವಾಕರ ಶೆಟ್ಟಿ ನೆಲ್ಯಾಡಿ,ಜಯರಾಮ ಶೆಟ್ಟಿ ಗಂಟಿಹೊಳೆ,ನಿವೃತ್ತ ಮುಖ್ಯ ಶಿಕ್ಷಕ ಆನಂದ ಮದ್ದೋಡಿ, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಗತಿಪರ ರೈತ ಮಹಿಳೆ ಜಯಶ್ರೀ  ಕಟ್‌ಬೆಲ್ತೂರು ರವರನ್ನು ಸಮ್ಮಾನಿಸಲಾಯಿತು ಹಾಗೂ ಬೆಳಿಗ್ಗೆ ಹಲಸು ಮೇಳಕ್ಕೆ ಶಿವಮೊಗ್ಗ ಲೋಕಸಭಾ ಸಂಸದರಾದ ಬಿ.ವೈ ರಾಘವೇಂದ್ರ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹಾಗೂ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಬೇಟಿ ನೀಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಹಲಸು ಮೇಳದ ಸಂಚಾಲಕ ಪ್ರದೀಪ ಕುಮಾರ್ ಶೆಟ್ಟಿ ಕಾರಿಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಹಲಸು ಮೇಳದ ಸಂಯೋಜಕ ಶ್ರೀಧರ ಖಾರ್ವಿ ಮರವಂತೆ ವಂದಿಸಿದರು.

ವರದಿ/ಚಿತ್ರ: ಗಿರಿ ಶಿರೂರು

Leave a Reply

Your email address will not be published. Required fields are marked *

one × five =