ಉಪ್ಪುಂದ; ಸಹಕಾರಿ ಸಂಸ್ಥೆಯ ಬೆಳವಣಿಗೆಯನ್ನು ಸಹಿಸದೆ ಈ ಹಿಂದೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಸಿಬಂದಿಗಳಾದ ಸುಭಾಶ್ಚಂದ್ರ ಮತ್ತು ದೀಪಕ್ ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡಿ, ಜಾಲತಾಣಗಳಲ್ಲಿ ಹಾಕುತ್ತಿರುವುದು ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಸಂಸ್ಥೆಯ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ಕೆಲಸ ಮಾಡುತ್ತಿದ್ದು ಸದಸ್ಯರ ವಿಶ್ವಾಸಗಳಿಸಿ ಇನ್ನಷ್ಟು ಎತ್ತರಕ್ಕೆ ಏರುತ್ತಿದೆ ಎಂದು ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ನಾಗೇಶ ಖಾರ್ವಿ ಅಳಿವೆಕೋಡಿ ಹೇಳಿದರು ಅವರು ಮಂಗಳವಾರ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಹಕಾರ ಸಂಘ ಉಪ್ಪುಂದದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಈ ಹಿಂದಿನ ಸಿಇಓ ಆಗಿರುವ ಸುಭಾಶ್ಚಂದ್ರ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಮತ್ತು ಅಧಕ್ಷ ಮೋಹನಚಂದ್ರ ಆಡಳಿತ ಮಂಡಳಿಯ ಗಮನಕ್ಕೆ ತಾರದೆ ರೂ.1ಕೋಟಿ 10ಲಕ್ಷ ಮೊತ್ತವನ್ನು ಠೇವಣಿಯಾಗಿ ಕುಂದಾಪುರ ಸೌಹಾರ್ದ ಸಹಕಾರಿಯಲ್ಲಿ ಇಟ್ಟಿದ್ದು ಆ ಸಹಕಾರಿಯ ನಷ್ಟದಿಂದಾಗಿ ನಮ್ಮ ಠೇವಣಿ ವಾಪಾಸ್ಸು ಬಂದಿಲ್ಲ, ಈ ಕುರಿತು ಸಿಐಡಿ ತನಿಖೆ ನಡೆಯುತ್ತಿದೆ ಇವರು ಸುಮಾರು ರೂ.40ಲಕ್ಷ ಮೊತ್ತವನ್ನು ಸಹಕಾರಿಯಿಂದ ದುರುಪಯೋಗಪಡಿಸಿಕೊಂಡಿರುವುದು ನಮ್ಮ ಪರಿಶೀಲನೆಯಿಂದ ತಿಳಿದುಬಂದಿದ್ದು ಇದರ ವಸೂಲಿಗಾಗಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ. ದೀಪಕ ಮತ್ತು ಸುಭಾಶ್ಚಂದ್ರ ಅವರನ್ನು ಸಂಸ್ಥೆಯ ಕೆಲಸದಿಂದ ವಜಾಗೊಳಿಸಿರುವುದರಿಂದ ಮತ್ತು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ಈಗಿನ ಆಡಳಿತ ಮಂಡಳಿಯ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದರು.
ಅವರ ಮೇಲೆ ಬೈಂದೂರು ನ್ಯಾಯಾಲಯದಲ್ಲಿ ಹಾಗೂ ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯಲ್ಲಿ ಕೇಸು ದಾಖಲಾಗಿ ತನಿಕಾ ಹಂತದಲ್ಲಿದ್ದು ಅದನ್ನು ತಪ್ಪಿಸಿಕೊಳ್ಳಲು ಸಂಸ್ಥೆಯ ಅಧ್ಯಕ್ಷರಾದ ನನ್ನ ಮೇಲೆ ಹಾಗೂ ನಿರ್ದೇಶಕರ ಹಾಗೂ ನಿವ್ರತ್ತ ಸಹಾಯಕ ನಿಬಂಧಕರಾದ ಅರುಣ ಕುಮಾರ್ ಎಸ್.ವಿ ಇವರ ಮೇಲೆ ಆರೋಪ ಮಾಡಿರುತ್ತಾರೆ. ನಮ್ಮ ಸಂಸ್ಥೆಯ ಹಣ ದುರುಪಯೋಗ ಮಾಡಿದ ಅವರಿಬ್ಬರ ಬಗ್ಗೆ ದಾಖಲೆಗಳಿದ್ದು, ಅವರಿಗೆ ಭಯ ಉಂಟಾಗಿ ಸುಮ್ಮನೆ ಸಂಸ್ಥೆಯ ಅಧ್ಯಕ್ಷರಾದ ನನ್ನ ಮೇಲೆ ಹಾಗೂ ನಿವ್ರತ್ತ ಸಹಾಯಕ ನಿಬಂಧಕರಾದ ಅರುಣ ಕುಮಾರ್ ಎಸ್.ವಿ ಇವರ ಹೆಸರು ಹಾಳು ಮಾಡಲು ಸುಮ್ಮನೆ ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಹಾಕಿರುತ್ತಾರೆ. ತನಿಖೆ ನಡೆದ ಬಳಿಕ ಕೇಲವೆ ದಿನಗಳಲ್ಲಿ ಅವರ ಬಣ್ಣ ಬಯಲಾಗುತ್ತದೆ ಎಂದರು.
ನಮ್ಮ ಹಿರಿಯರು ಮೀನುಗಾರರಿಗಾಗಿ ಈ ಸಂಸ್ಥೆಯನ್ನು ಹುಟ್ಟುಹಾಕಿದ್ದು 19 ವರ್ಷಗಳಿಂದ ಮೀನುಗಾರರ ಹಾಗೂ ಜನರ ಸಹಕಾರದಿಂದ ಸಾರ್ವಜನಿಕರ ವಿಶ್ವಾಸಗಳಿಸಿ ವ್ಯವಹಾರ ನಡೆಸುತ್ತಾ ಸದೃಢವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಶಂಕರ ಖಾರ್ವಿ,ನಿರ್ದೇಶಕರಾದ ಮಂಜುನಾಥ ಜಿ.ಖಾರ್ವಿ,ನಾಗೇಶ ಮಡಿಕಲ್,ಮೋಹನದಾಸ್ ಖಾರ್ವಿ,ರಾಜೇಂದ್ರ ಖಾರ್ವಿ,ಮಂಜುನಾಥ,ಮಹೇಶ್ ಕೆ,ಜ್ಯೋತಿ ಖಾರ್ವಿ,ಲಕ್ಷ್ಮೀ, ಸಂಸ್ಥೆಯ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಕೆ. ಹಾಜರಿದ್ದರು.
