ಬೈಂದೂರು: ಉಡುಪಿ ಜಿಲ್ಲಾ ಪಂಚಾಯತ್,ಕೃಷಿ ಇಲಾಖೆ ಕುಂದಾಪುರ  ಹಾಗೂ ರೈತ ಸಂಪರ್ಕ ಕೇಂದ್ರ ಬೈಂದೂರು ಇದರ 2022-23ನೇ ಸಾಲಿನ ಆತ್ಮ ಯೋಜನೆಯಡಿಯಲ್ಲಿ ರೈತರ ದಿನಾಚರಣೆ ಹಾಗೂ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮ ಶಿರೂರು ಸರ್ಪನಮನೆ ವಠಾರದಲ್ಲಿ ನಡೆಯಿತು.

ತಾಲೂಕು ಕೃಷಿಕ ಸಮಾಜದ ನಿರ್ದೇಶಕ ವೆಂಕಟೇಶ ಹೆಬ್ಬಾರ್ ರೈತರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಕೃಷಿಯಲ್ಲಿ ತಂತ್ರಜ್ಞಾನದ ಅಳವಡಿಕೆಯೊಂದಿಗೆ ತೊಡಗಿಸಿಕೊಂಡಾಗ ಅಧಿಕ ಲಾಭ ಸಾಧ್ಯ.ಸರಕಾರ,ಇಲಾಖೆ ಹಲವು ಯೋಜನೆಗಳನ್ನು ಕೃಷಿ ಕ್ಷೇತ್ರಕ್ಕೆ ನೀಡುತ್ತಿದೆ.ಇದರ ಜೊತೆಗೆ ಪ್ರಾಕೃತಿಕ ಸಮಸ್ಯೆಗಳು ಕೃಷಿಕರಿಗೆ ಸವಾಲಾಗಿದೆ.ಸಾಂಪ್ರದಾಯಿಕ ವ್ಯವಸ್ಥೆಗೆ ಬದಲಾಗಿ ಆಧುನಿಕ ಪದ್ದತಿ ಅವಲಂಬಿಸಿಕೊಂಡಾಗ ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಆರತಿ ಪ್ರಕಾಶ ಉಪಾಧ್ಯ,ಕುಂದಾಪುರ ಸಹಾಯಕ ಕೃಷಿ ನಿರ್ದೇಶಕಿ ರೂಪಾ ಜೆ.ಮಾಡ,ಬೈಂದೂರು ಕೃಷಿ ಅಧಿಕಾರಿ ಗಾಯತ್ರಿದೇವಿ,ತಾ.ಪಂ ಮಾಜಿ ಸದಸ್ಯ ನಾರಾಯಣ ಅಳ್ವೆಗದ್ದೆ,ಹಿರಿಯರಾದ ನಾಗೇಶ ಮೇಸ್ತ ನಾಗಿನಗದ್ದೆ,ವಕೀಲ ಲಿಂಗಪ್ಪ ಮೇಸ್ತ ಮೊದಲಾದವರು ಉಪಸ್ಥಿತರಿದ್ದರು.

 

ಈ ಸಂದರ್ಭದಲ್ಲಿ ಹಿರಿಯ ಕೃಷಿಕರಾದ ಗೋವಿಂದ ಮೇಸ್ತ ಸರ್ಪನಮನೆಯವರನ್ನು ಸಮ್ಮಾನಿಸಲಾಯಿತು.ಸಹಾಯಕ ಕೃಷಿ ತಾಂತ್ರಿಕ ವ್ಯವಸ್ಥಾಪಕಿ ಅನುಷಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ದೇವರಾಜ್ ಮೇಸ್ತ ವಂದಿಸಿದರು.

News/Girish shiruru

 

Leave a Reply

Your email address will not be published.

seventeen + 9 =