ಶಿರೂರು: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇದರ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ ಶಾಲಾ ವಠಾರದಲ್ಲಿ ನಡೆಯಿತು.ಬೈಂದೂರು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ ಕ್ರೀಡೆಯಿಂದ ಬಲಯುತರಾಗಿ ಜೀವನದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ.ಕ್ರೀಡೆಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಡರಾಗಲು ಸಾಧ್ಯ,ಕ್ರೀಡೆ ಯುವಜನರ ಚೇತನವಾಗಬೇಕು.ನಿರಂತರವಾದ ಕಠಿಣ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾದ್ಯ ಎಂದರು.
ಶಾಲಾ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿ ಅರುಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಬೈಂದೂರು ಆರಕ್ಷಕ ಠಾಣೆಯ ಸಬ್ ಇನ್ಸಪೇಕ್ಟರ್ ಮಹೇಶ್ ವಿದ್ಯಾರ್ಥಿಗಳ ಪಥಸಂಚಲನ ವೀಕ್ಷಿಸಿ ವಂದನೆ ಸ್ವೀಕಾರ ಮಾಡಿದರು.
ಮುಖ್ಯ ಅತಿಥಿಗಳಾಗಿ ಬೈಂದೂರು ಆರಕ್ಷಕ ಠಾಣೆಯ ಸಂಜು,ತಾಯಂದಿರ ಸಮಿತಿ ಉಪಾಧ್ಯಕ್ಷೆ ಕಾಮಾಕ್ಷಿ ಮೊಗೇರ್,ಗ್ರಾ.ಪಂ.ಸದಸ್ಯರಾದ ಪ್ರೇಮ ಮೊಗೇರ, ಚಂದ್ರಾವತಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಶಂಕರ ಶಿರೂರು ಸ್ವಾಗತಿಸಿದರು.ಶಿಕ್ಷಕ ಸಿ. ಎನ್. ಬಿಲ್ಲವ, ಕಾರ್ಯಕ್ರಮ ನಿರ್ವಹಿಸಿದರು.ದೈಹಿಕ ಶಿಕ್ಷಕಿ ಮಂಜುಳಾ ಶೆಟ್ಟಿ ವಂದಿಸಿದರು.
News/Giri shiruru
pic/a.one studio shiruru