ಬೈಂದೂರು: ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ.ಮಕ್ಕಳನ್ನು ಕೇವಲ ಪಠ್ಯಪುಸ್ತಕಕ್ಕೆ ಸೀಮಿತ ಮಾಡದೇ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಬೇಕಿದೆ.ಮಕ್ಕಳ ದೈಹಿಕ ಬೆಳವಣಿಗೆಗೆ ಕ್ರೀಡೆ ಅತೀ ಅವಶ್ಯ.ಶಾಲಾ ಹಂತದಲ್ಲೇ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಉತ್ತಮ ಭವಿಷ್ಯ ಸಾಧ್ಯ ಎಂದು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮ್ಯಾನೆಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಹೇಳಿದರು ಅವರು ಸ.ಹಿ.ಪ್ರಾ.ಶಾಲೆ ಮುಲ್ಲಿಬಾರು ಹೊಸೂರಿನಲ್ಲಿ ನಡೆದ 2025 ನೇ ಸಾಲಿನ ಶಾಲಾ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ರೋಟರಿ ಕ್ಲಬ್ ನಿಕಟಪೂರ್ವಾಧ್ಯಕ್ಷ ಮೋಹನ್ ರೇವಣ್ಕರ್ ಧ್ವಜಾರೋಹಣಗೈದರು. ಬೈ.ವ್ಯ.ಸೇ.ಸಹಕಾರಿ ಸಂಘದ ತೂದಳ್ಳಿ ಶಾಖಾ ವ್ಯವಸ್ಥಾಪಕಿ ಲಕ್ಷ್ಮೀ ನಾಗೇಶ ಅಧ್ಯಕ್ಷತೆ ವಹಿಸಿದ್ದರು.
ಬಿ.ಆರ್.ಪಿ ಮಂಜುನಾಥ ದೇವಾಡಿಗ,ಇಂಜಿನಿಯರ್ ಸಂತೋಷ ಮಹಾದೇವ ತೂದಳ್ಳಿ,ಸ.ಹಿ.ಪ್ರಾ.ಶಾಲೆ ಬಾಡಾ ಶಾಲೆಯ ಮುಖ್ಯ ಶಿಕ್ಷಕ ಗಿರೀಶ್ ಪಿ.ಮೇಸ್ತ,ಎಸ್.ಡಿ.ಎಮ್.ಸಿ ಮಾಜಿ ಅಧ್ಯಕ್ಷ ತಿಮ್ಮ ಮರಾಠಿ,ದೇವೇಂದ್ರ ಕೆ.ಮರಾಠಿ,ಮಂಜುನಾಥ ಮರಾಠಿ,ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ದಯಾನಂದ ಮರಾಠಿ,ಗೌರವಾಧ್ಯಕ್ಷ ನಾರಾಯಣ ಪೂಜಾರಿ,ಅಧ್ಯಕ್ಷ ಮಹಾದೇವ ಮರಾಠಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮ್ಯಾಥ್ಯೂ ಕೆ.ಎಸ್,ಕಾರ್ಯದರ್ಶಿ ವಾಸುದೇವ ಮರಾಠಿ ಹೊಸೂರು,ವಿದ್ಯಾರ್ಥಿ ನಾಯಕ ದರ್ಶಿತ್ ಕುಮಾರ್,ನಾಯಕಿ ದಿಯಾ ಮರಾಠಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ರತ್ತುಬಾಯಿ ಜನತಾ ಫ್ರೌಢಶಾಲೆಯ ವಿದ್ಯಾರ್ಥಿ ಹಾಗೂ ರಾಜ್ಯ ಮಟ್ಟದ ಕ್ರೀಡಾಪಟು ಜುನೈದ್ ಇಮ್ರಾನ್ ಸೌಂದಾಳೆ ಯವರನ್ನು ಸಮ್ಮಾನಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಮಹಾಬಲೇಶ್ವರ ಎಸ್.ಸ್ವಾಗತಿಸಿದರು.ಶಿಕ್ಷಕ ಸುಧಾಕರ ಪಿ.ಬೈಂದೂರು ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ವಿನಾಯಕ ಪಟಗಾರ್ ವಂದಿಸಿದರು.
ವರದಿ/ಗಿರಿ ಶಿರೂರು