ಬೈಂದೂರು: ರೈತ ಸಂಘ ಬೈಂದೂರು ಇದರ ವತಿಯಿಂದ ನಿರಂತರವಾಗಿ ಕಳೆದ 21 ದಿನಗಳಿಂದ ನಡೆಯುತ್ತಿರುವ ರೈತರ ಧರಣಿ ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭಾನುವಾರ ಬೇಟಿ ನೀಡಿದರು.ರೈತರ ಮನವಿ ಸ್ವೀಕರಿಸಿ ಮಾತನಾಡಿದ ಅವರು ಗ್ರಾಮೀಣ ಭಾಗಗಳನ್ನು ಕೈಬಿಡಲು ಆಗ್ರಹಿಸಿ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿಯ ಸಂಪೂರ್ಣ ಮಾಹಿತಿ ಪಡೆದಿದ್ದೇನೆ ಮತ್ತು ಈ ಕುರಿತು ಜಿಲ್ಲಾಧಿಕಾರಿಗಳಿಂದ ವರದಿ ಪಡೆದಿದ್ದು ಸಂಬಂಧಪಟ್ಟ ಸಚಿವರ ಜೊತೆ ಕೂಡ ಚರ್ಚಿಸಿದ್ದೇನೆ.ರೈತರ ನಿಯೋಗದ ಜೊತೆ ಈ ಕುರಿತು ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ ಯವರ ಜೊತೆ ಮಾತನಾಡಿದ್ದೇನೆ.ರೈತರ ನಿಯೋಗದ ಜೊತೆ ಬೆಂಗಳೂರಿನಲ್ಲಿ ಸಚಿವರ ಜೊತೆ ಮಾತುಕತೆ ನಡೆಸಿ ಅತೀ ಶೀಘ್ರದಲ್ಲಿ ರೈತರ ಬೇಡಿಕೆಗೆ ನ್ಯಾಯ ಒದಗಿಸಿಸುವ ಕೆಲಸ ಪ್ರಾಮಾಣಿಕ ಪ್ರ್ಯಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ವಕೀಲರಾದ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ,ಎಸ್.ರಾಜು ಪೂಜಾರಿ,ಮ್ಯಾಥ್ಯೂ ಕೆ.ಎಸ್,ಮಹಾದೇವ ಪೂಜಾರಿ ಕಿಸ್ಮತ್ತಿ,ಪದ್ಮಾಕ್ಷ,ಹೆರಿಯಣ್ಣ ಪೂಜಾರಿ,ನಾಗಪ್ಪ ಮರಾಠಿ ಹೊಸೂರು ಮೊದಲಾದವರು ಹಾಜರಿದ್ದರು.

ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವೀರಭದ್ರ ಗಾಣಿಗ ಕಾರ್ಯಕ್ರಮ ನಿರ್ವಹಿಸಿದರು.
ವರದಿ/ಗಿರಿ ಶಿರೂರು