ಬೈಂದೂರು; ರೈತ ಸಂಘ ಬೈಂದೂರು ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ನೇತ್ರತ್ವದಲ್ಲಿ ನಡೆಯುತ್ತಿರುವ 13ನೇ ದಿನಕ್ಕೆ ಕಾಲಿಟ್ಟಿದೆ.ಆಲಂದೂರು ಭಾಗದ ರೈತರು ಶನಿವಾರದ ಪ್ರತಿಭಟನೆ ನೇತ್ರತ್ವ ವಹಿಸಿದ್ದರು.ಇದೇ ದಿನ ಶಾಸಕರ ನೇತ್ರತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಕೂಡ ಆಯೋಜಿಸಲಾಗಿತ್ತು.ಈ ಪ್ರತಿಭಟನೆ ನಡೆಯುವಾಗ ಧರಣಿ ನಿರತ ರೈತರು ಶಾಂತಿಯುತವಾಗಿ ಸಹಕಾರ ನೀಡಿ ಪ್ರೋತ್ಸಾಹಿಸಿದರು.ಬಿಜೆಪಿ ಧರಣಿ ಮುಗಿದ ಬಳಿಕ ಶಾಸಕರು ರೈತ ಸಂಘಟನೆ ನಡೆಯುತ್ತಿದ್ದ ವೇದಿಕೆಗೆ ಆಗಮಿಸಿದ್ದರು ಮತ್ತು ರೈತರ ಜೊತೆ ಮಾತನಾಡಿ ರೈತರ ಹೋರಾಟಕ್ಕೆ ನಮ್ಮ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಈ ಸಂದರ್ಭ ಶಾಸಕರ ಜೊತೆ ಕೆಲವು ಬಿಜೆಪಿ ಕಾರ್ಯಕರ್ತರು ಪಕ್ಷದ ಚಿಹ್ನೆ ಇರುವ ಶಾಲು ಧರಿಸಿ ವೇದಿಕೆ ಹತ್ತಿದ್ದಾಗ ರೈತರ ಆಕ್ರೋಸಿದರು ಮತ್ತು ಈ ಹೋರಾಟದಲ್ಲಿ ಯಾವುದೇ ರಾಜಕೀಯ ಇಲ್ಲಾ ಇದು ಪಕ್ಷಾತೀತವಾಗಿರುವ ಹೋರಾಟ ಹೀಗಾಗಿ ಯಾವುದೇ ಪಕ್ಷದ ಬಾವುಟ ಹಿಡಿದು ವೇದಿಕೆ ಹತ್ತಬಾರದು ಎಂದು ಆಕ್ಷೇಪಿಸಿದರು.ಈ ಸಂದರ್ಭ ರೈತರು ಮತ್ತು ಕೆಲವು ಕಾರ್ಯಕರ್ತರ ನಡುವೆ ಸ್ವಲ್ಪ ಮಾತಿನ ಚಕಮಕಿ ನಡೆಯಿತು.ಬಳಿಕ ಮದ್ಯ ಪ್ರವೇಶಿಸಿದ ಶಾಸಕರು ರೈತರ ಬೇಡಿಕೆಗೆ ಮೊದಲ ಆಧ್ಯತೆ. ಅವರ ಜೊತೆ ಸದಾ ನಮ್ಮ ಸಹಕಾರವಿದೆ ಎಂದು ಸಮಾಧಾನಪಡಿಸಿದರು.
ಪ್ರಧಾನ ಭಾಷಣಕಾರರಾಗಿ ಆಗಮಿಸಿದ ಬೆಂಗಳೂರಿನ ವಕೀಲರಾದ ವಸಂತ್‌ರಾಜ್ ಹೊಸೂರು ಮಾತನಾಡಿ ಬೈಂದೂರು ಪಟ್ಟಣ ಪಂಚಾಯತ್ ವಿಚಾರದಲ್ಲಿ ಈಗಾಗಲೇ ಹೈಕೋಟ್‌ನಲ್ಲಿ ದಾವೇ ಇದೆ.ಜಿಲ್ಲಾಡಳಿತ ಕಾನೂನು ವಿರುದ್ದ ರೀತಿಯಲ್ಲಿ ನಿರ್ಣಯಕೈಗೊಳ್ಳುವುದು ಸಮಂಜಸವಲ್ಲ. ರೈತರ ಪಕ್ಷಾತೀತ ಹೋರಾಟಕ್ಕೆ ಜನಪ್ರತಿನಿಧಿಗಳು,ಸರಕಾರ ತಕ್ಷಣ ಸ್ಪಂಧಿಸಬೇಕು ಎಂದು ಆಗ್ರಹಿಸಿದರು.
ಬೆಳಿಗ್ಗೆ ಆಲಂದೂರು ಭಾಗದ ರೈತರು ಚೆಂಡೆ,ವಾದ್ಯದ ಜೊತೆಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಪ್ರತಿಭಟನೆಯಲ್ಲಿ ಗಣೇಶ ಗಂಗೊಳ್ಳಿ ,ಸುರೇಶ ಮಾಕೋಡಿ ಆಲಂದೂರು ಹಾಗೂ ಗೌರಿ ತಗ್ಗರ್ಸೆ ಬಳಗದವರಿಂದ ವಿಶೇಷ ಜನಪದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಯಡ್ತರೆ ಗ್ರಾ.ಪಂ ಮಾಜಿ ಸದಸ್ಯರಾದ ಉದಯ ಮಾಕೋಡಿ,ಮ್ಯಾಥ್ಯೂ ಕೆ.ಎಸ್,ನಾಗಪ್ಪ ಮರಾಠಿ ಹೊಸೂರು,ಲಿಮೋನ್ ಬೈಂದೂರು,ಅನೀಶ್ ಕುಮಾರ್ ಶೆಟ್ಟಿ, ಶಾಂತಾನಂದ ಶೆಟ್ಟಿ ಆಲಂದೂರು,ಮಹಾದೇವ ಕಿಸ್ಮತ್ತಿ, ದಿನೇಶ್ ಊದೂರು,ವಿನಾಯಕ ಊದೂರು,ಪ್ರಶಾಂತ ಅತ್ಯಾಡಿ,ಸುಭಾಷ್ ಗಂಗನಾಡು,ಗಣಪ ಗಂಗನಾಡು ಹಾಗೂ ಆಲಂದೂರು,ಕೋಣಮಕ್ಕಿ ಹಾಗೂ ಊದೂರು ರೈತರು ಹಾಜರಿದ್ದರು.



ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವೀರಭದ್ರ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.
ವರದಿ/ಚಿತ್ರ; ಗಿರಿ ಶಿರೂರು