Month: June 2026

ಸ.ಹಿ.ಪ್ರಾ.ಶಾಲೆ ಅರಮನೆಹಕ್ಲು ನೂತನ ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಆಯ್ಕೆ

ಶಿರೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಮನೆಹಕ್ಲು ಶಿರೂರು ಇದರ ನೂತನ ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಆರತಿ,ಸದಸ್ಯರಾಗಿ ಶಂಕರ ಮೇಸ್ತ,ರವೀಂದ್ರ ಗಾಣಿಗ,ಕುಸುಮಾ,ನೇತ್ರಾವತಿ ಪೂಜಾರಿ,ಪೂರ್ಣಿಮಾ,ಇಂದಿರಾ,ಸಬೀನಾ,ಮುನೀರಾ,ಶಕೀಲಾ,ಯಶೋದಾ,ಹೇಮಾವತಿ,ಶಾರದಾ,ಹೆರಿಯಕ್ಕ,ಶಾಂತಿ,ಸುಶೀಲಾ,ದಯಾನಂದ ಪೂಜಾರಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜೆಸಿಐ ಶಿರೂರು ವಿಶ್ವ ರಕ್ತದಾನಿಗಳ ದಿನಾಚರಣೆ

ಬೈಂದೂರು; ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ಜೆಸಿಐ ಶಿರೂರು ಘಟಕದ ವತಿಯಿಂದ ಶಿರೂರು ಗ್ರಾಮದ ಜಡ್ಗದ್ದೆ ನಿವಾಸಿ ಉಮೇಶ ಪೂಜಾರಿ ಇವರು ಹಲವಾರು ವರ್ಷ ದಿಂದ ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು ಹಲವು ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದು 20 ಬಾರಿ…